Friday, September 30, 2016

ಖ್ಯಾತ ಮನೋವೈದ್ಯ ಡಾ. ಅಶೋಕ್‌ ಪೈ ಸ್ಕಾಟ್‌ಲ್ಯಾಂಡ್‌ನ‌ಲ್ಲಿ ವಿಧಿವಶ


ಬೆಂಗಳೂರು :kannadaevision.in) ರಾಜ್ಯದ ಪ್ರಖ್ಯಾತ ಮನೋರೋಗ ತಜ್ಞ ಡಾ.ಅಶೋಕ್‌ ಪೈ ಅವರು ಹೃದಯಾಘಾತದಿಂದ ಗುರುವಾರ ತಡರಾತ್ರಿ ಸ್ಕಾಟ್‌ಲ್ಯಾಂಡ್‌ನ‌ಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. 
ವಿಶ್ವ ಆರೋಗ್ಯ ಸಂಸ್ಥೆ ನಡೆಸಿಕೊಡುತ್ತಿದ್ದ  ವಿಚಾರ ಸಂಕಿರಣದಲ್ಲಿ ಭಾಗಿಯಾಗುವ ಸಲುವಾಗಿ  ಪತ್ನಿ ರಜನಿ ಪೈ ಅವರೊಂದಿಗೆ ಅವರು ಸ್ಕಾಟ್‌ಲ್ಯಾಂಡ್‌ಗೆ ತೆರಳಿದ್ದರು. ಹೋಟೆಲ್‍ನ ಕೋಣೆಯಲ್ಲಿ  ಹೃದಾಯಾಘಾತ ಸಂಭವಿಸಿದ್ದು ,ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತದರೂ ಚಿಕಿತ್ಸೆ ಫಲಕಾಣದೆ ಇಹಲೋಕ ತ್ಯಜಿಸಿದರು. 
ಮನೋರೋಗಿಗಳ ಪಾಲಿಗೆ ಆಶಾಕಿರಣವಾಗಿ ಪ್ರಥಮ ಉಷಾಕಿರಣ, ಅಘಾತ, ಕಾಡಿನ ಬೆಂಕಿ ಸೇರಿದಂತೆ ಕೆಲ ಮನೋರೋಗಗಳಿಗೆ ಸಂಬಂಧಿಸಿದ ಚಿತ್ರಗಳನ್ನೂ ನಿರ್ಮಾಣ ಮಾಡಿ, ಮನೋರೋಗಿಗಳಿಗಾಗಿ 10ಕ್ಕೂ ಹೆಚ್ಚು ಪುಸ್ತಕಗಳನ್ನೂ ಬರೆದ ಹಿರಿಮೆ ಡಾ.ಪೈ ಅವರದ್ದು. 
ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ. ಪೈ ಅವರಿಗೆ ಡಾ.ಸಿ.ರಾಯ್ ಪ್ರಶಸಿ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿವಿಯ ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳು ಪೈ ಅವರ ಸಾಧನೆಗೆ ಸಂದಿದ್ದವು. 
ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನೀರವ ಮೌನ ಆವರಿಸಿದ್ದು, ನಾಳೆ ಸಂಜೆ ಪೈ ಅವರ ಮೃತ ದೇಹ ರಾಜ್ಯಕ್ಕೆ ತರಲಾಗುತ್ತಿದ್ದು, ಆ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ತೆ ಮಾಡಿ  ಅಂತಿಮ ವಿಧಿವಿಧಾನ ನೇರವೇರಿಸಲಾಗುತ್ತದೆ ಎಂದು  ಕುಟುಂಬ ಮೂಲಗಳು ತಿಳಿಸಿವೆ
key word:  psychiatrist-ashok-pai-passed- away



No comments:

Post a Comment