Wednesday, September 28, 2016

ಬಿಜೆಪಿ-ಕಾಂಗ್ರೆಸ್ ವಾಕ್ಸಮರ ಮೇಯರ್ ಚುನಾವಣೆ ನಂತರ ಸಭಾತ್ಯಾಗ ಮಾಡಿದ ಬಿಜೆಪಿ



ಬೆಂಗಳೂರು:  (kannadaevision.blogspot.in)  ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮೇಯರ್ ಚುನಾವಣೆ ಪ್ರಕ್ರಿಯೆ ನಂತರ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.ಮೇಯರ್ ಚುನಾವಣೆ ವೇಳೆ ಮತದಾನ ಮಾಡಲು ಬಿಜೆಪಿ ಸದಸ್ಯರಾದ ಪಿ.ಸಿ ಮೋಹನ್ ಮತ್ತು ರಾಜೀವ್ ಚಂದ್ರಶೇಖರ್ ತಡವಾಗಿ ಆಗಮಿಸಿದ್ದರು. ತಡವಾಗಿ ಆಗಮಿಸಿದ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಲು ಚುನಾವಣಾ ಪ್ರಕ್ರಿಯೆ ನಡೆಸಿದ್ದ ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ನಿರಾಕರಿಸಿದ್ದಾರೆ. ಈ ವಿಷಯಕ್ಕೆ ರೊಚ್ಚಿಗೆದ್ದು ಬಿಜೆಪಿ ವಾಕ್ಸಮರ ನಡೆಸಿದೆ.


ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸರ್ವ ಪಕ್ಷ ಸಭೆಯಲ್ಲಿ ಹಾಜರಾಗಿದ್ದ ಕಾರಣ ಬಿಬಿಎಂಪಿ ಕಚೇರಿಗೆ ಬರಲು ತಡವಾಯಿತು ಎಂದು ಮತದಾನ ಅವಕಾಶ ವಂಚಿತರಾದ ಸದಸ್ಯರು ಹೇಳಿದ್ದಾರೆ, ಆದರೆ ವಿ. ಜಯಂತಿ ಯಾವುದೇ ಕಾರಣಕ್ಕೂ ತಡವಾಗಿ ಬಂದವರಿಗೆ ಮತದಾನ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿ ಅವಕಾಶವನ್ನು ನಿರಾಕರಿಸಿದ್ದರು.ಏತನ್ಮಧ್ಯೆ, ಇಲ್ಲಿಯವರೆಗೆ ಇಲ್ಲದ ಕಾವೇರಿ ಪ್ರೀತಿ ಈಗ ಹೇಗೆ ಬಂತು. ನಿಮಗೆ ಮಾನ ಮರ್ಯಾದೆ ಇಲ್ವಾ? ಎಂದು ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರನ್ನು ಲೇವಡಿ ಮಾಡಿದಾಗ ಬಿಬಿಎಂಪಿ ಸಭಾಂಗಣ ಅಕ್ಷರಶಃ ರಣರಂಗವಾಗಿ ಮಾರ್ಪಾಡಾಯಿತು.



ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು,ಕೋಪಗೊಂಡ ಬಿಜೆಪಿ ಸದಸ್ಯರು ನಿಯಮಾವಳಿಯ ಪ್ರತಿಯನ್ನು ಹರಿದೆಸಿದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಸ್ವಲ್ಪ ಹೊತ್ತು ವಾಕ್ಸಮರ ನಡೆಸಿ ಮೇಯರ್ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆ ಹೊತ್ತಿಗೆ ಹೆದರಿ ಓಡಿಹೋಗುತ್ತಿದ್ದೀರಾ? ಎಂದು ಕಾಂಗ್ರೆಸ್ ಸದಸ್ಯರು ಬಿಜೆಪಿಯವರನ್ನು ಕಿಚಾಯಿಸಿದರು.

Keywords: Bangaluru-news-mayor-election-campaign

No comments:

Post a Comment