Wednesday, September 28, 2016

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಬಿಎಂಪಿ ನೂತನ ಮೇಯರ್ ಆಗಿ ಜಿ. ಪದ್ಮಾವತಿ ಆಯ್ಕೆ

ಬೆಂಗಳೂರು:(kannadaevision.in) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್‌ಸ್ಥಾನಕ್ಕೆ ಪ್ರಕಾಶ್‌ ನಗರದ ಕಾಂಗ್ರೆಸ್‌ ಸದಸ್ಯೆ ಜಿ. ಪದ್ಮಾವತಿ ಆಯ್ಕೆಯಾಗಿದ್ದಾರೆ.
ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರು 142  ಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಲಕ್ಷ್ಮಿ ಅವರಿಗೆ ಒಟ್ಟು 120 ಮತ ಲಭಿಸಿದೆ.

ಕಣದಲ್ಲಿ ಯಾರೆಲ್ಲ ಇದ್ದರು?

ಮೇಯರ್ ಸ್ಥಾನ: ಪ್ರಕಾಶ್ ನಗರದ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿ  ಪದ್ಮಾವತಿ VS ಗಣೇಶ ಮಂದಿರ ವಾರ್ಡ್ ಸದಸ್ಯೆ ಬಿಜೆಪಿ ಅಭ್ಯರ್ಥಿ ಡಿ.ಎಚ್. ಲಕ್ಷ್ಮಿ


ಉಪಮೇಯರ್  ಸ್ಥಾನ:  ರಾಧಾಕೃಷ್ಣ ನಗರದ ಸದಸ್ಯ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ VS ಹೆಚ್‍ಎಸ್‍ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ

ಉಪಮೇಯರ್  ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ ಅವರು 142 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆ
ಮೇಯರ್ ಚುನಾವಣೆ ಪ್ರಕ್ರಿಯೆ ಬುಧವಾರ ಬೆಳಗ್ಗೆ 11.30ಕ್ಕೆ ಆರಂಭವಾಗಿತ್ತು, ಬಿಬಿಎಂಪಿ ಕಚೇರಿಯಲ್ಲಿ ಒಟ್ಟಾರೆ 269 ಸದಸ್ಯರು ಮತದಾನದ ಹಕ್ಕು ಹೊಂದಿದ್ದು ಕೈ ಎತ್ತುವ ಮೂಲಕ ಮತದಾನ ಮಾಡಿದ್ದಾರೆ.

ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದರು.
key word : bbmp mayor padmavathi

No comments:

Post a Comment